Untitled Document
Sign Up | Login    
Dynamic website and Portals
  

Related News

ಪುದುಚೇರಿ ನೂತನ ರಾಜ್ಯಪಾಲರಾಗಿ ಕಿರಣ್ ಬೇಡಿ ನೇಮಕ

ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ಪುದುಚೆರಿಯ ರಾಜ್ಯಪಾಲರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ನೇಮಕ ಮಾಡಲಾಗಿದೆ. ಇಂತಹ ಅದ್ಭುತ ಅವಕಾಶ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ ಎಂದು ಕಿರಣ್ ಬೇಡಿ ಅವರು ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಇತ್ತೀಚೆಗೆ ಪುದುಚೆರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ...

ದೆಹಲಿಯ ಚುನಾವಣೆಯಲ್ಲಿ ಸೋಲು: ಬಿಜೆಪಿಗೆ ಆರ್.ಎಸ್.ಎಸ್ ತರಾಟೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಹಿನ್ನಲೆಯಲ್ಲಿ ಬಿಜೆಪಿ ಕಾರ್ಯತಂತ್ರಕ್ಕೆ ಆರ್.ಎಸ್.ಎಸ್ ಗರಂ ಆಗಿದೆ. ಕೊನೆ ಕ್ಷಣದಲ್ಲಿ ಸಿಎಂ ಅಭ್ಯರ್ಥಿಯಾಗಿ ಕಿರಣ್ ಬೇಡಿ ಆಯ್ಕೆ ತಪ್ಪು ನಿರ್ಧಾರ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗಿದೆ ತರಾಟೆಗೆ ತೆಗೆದುಕೊಂಡಿದೆ. ಚುನಾವಣೆ ಸೋಲಿಗೆ ಯಾರು...

ಚುನಾವಣೆ ಹಿಂದಿನ ದಿನ ಹೊರಡಿಸಿದ್ದ ಫತ್ವಾ ಸೋಲಿಗೆ ಕಾರಣ: ಕಿರಣ್ ಬೇಡಿ

'ದೆಹಲಿ' ಚುನಾವಣೆಯಲ್ಲಿ ಶಾಹಿ ಇಮಾಮ್ ಬುಖಾರಿ ಫತ್ವಾ ಹೊರಡಿಸಿದ್ದೇ ತಮ್ಮ ಸೋಲಿಗೆ ಕಾರಣ ಎಂದು ಬಿಜೆಪಿ ನಾಯಕಿ, ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಆರೋಪಿಸಿದ್ದಾರೆ. ಫೆ.11ರಂದು ಎ.ಎನ್.ಐ ಪ್ರತಿನಿಧಿಯೊಂದಿಗೆ ಮಾತನಾಡಿರುವ ಕಿರಣ್ ಬೇಡಿ, ದೆಹಲಿ ಜಮ್ಮಾ ಮಸೀದಿಯ ಶಾಹಿ ಇಮಾಮ್...

ದೆಹಲಿಯಲ್ಲಿ ಪಕ್ಷ ಸೋಲಿಗೆ ಸಾಮೂಹಿಕ ಹೊಣೆ: ಬಿಜೆಪಿ

ದೆಹಲಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ತೀವ್ರ ಮುನ್ನಡೆ ಸಾಧಿಸಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಇನ್ನು ಕೆಲವೇ ಸಮಯದಲ್ಲಿ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಈ ನಡುವೆ ಬಿಜೆಪಿ ಹಿನ್ನಡೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ...

ದೆಹಲಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿಗೆ ಮುಖಭಂಗ

'ದೆಹಲಿ' ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣಾನಗರ ಕ್ಷೇತ್ರದಿಂದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಿರಣ್ ಬೇಡಿ ಅವರು ಹೀನಾಯ ಸೋಲನುಭವಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಎಸ್.ಕೆ ಬಗ್ಗಾ ಅವರ ವಿರುದ್ಧ ಕಿರಣ್ ಬೇಡಿ 1,150 ಮತಗಳ ಅಂತರದಿಂದ ಹೀನಾಯ ಸೋಲನುಭವಿಸಿದ್ದಾರೆ....

ದೆಹಲಿಯಲ್ಲಿ ಬಿಜೆಪಿ ಹಿನ್ನಡೆ: ಹೈಕಮಾಂಡ್ ಕ್ಷಮೆಯಾಚಿಸಿದ ಕಿರಣ್ ಬೇಡಿ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಸಾಧಿಸಿರುವುದಕ್ಕೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಕಿರಣ್ ಬೇಡಿ, ಸೋಲಿ ಹೊಣೆ ಹೊತ್ತಿದ್ದು, ಬಿಜೆಪಿ ಹೈಕಮಾಂಡ್ ಕ್ಷಮೆಯಾಚಿಸಿದ್ದಾರೆ. ಕೃಷ್ಣಾಷ್ಣಾನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಿರಣ್ ಬೇಡಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಸ್.ಕೆ.ಬಗ್ಗಾ ವಿರುದ್ಧ 2476 ಮತಗಳ ಅಂತರದಿಂದ...

ದೆಹಲಿ ಚುನಾವಣೆ: ಪಕ್ಷ ಸೋತರೆ ತಾನೇ ಹೊಣೆ- ಕಿರಣ್ ಬೇಡಿ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಬಿಜೆಪಿ ಪರವಾಗಿ ಬರಲಿದೆ ಎಂದು ಸಿಎಂ ಅಭ್ಯರ್ಥಿ ಕಿರಣ್ ಬೇಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಮಾತನಾದಿದ ಅವರು, ಫೆ .10ರಂದು ಪ್ರಕಟವಾಗಲಿರುವ ಫಲಿತಾಂಶ ಬಿಜೆಪಿ ಪರವಾಗಿ ಬರಲಿದೆ ಎನ್ನುವುದು ನನ್ನ ಭಾವನೆ. ಒಂದು ವೇಳೆ ಬಿಜೆಪಿಯೇನಾದರೂ ಸೋತರೆ...

ದೆಹಲಿ ವಿಧಾನಸಭಾ ಚುನಾವಣೆ: ಮತದಾನ ಆರಂಭ

ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಒಟ್ಟು 1,33,14,215 ಮತದಾರರು ಸುಮಾರು 673 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಕೊರೆಯುವ ಚಳಿಯ ವಾತಾವರಣವಿದ್ದರೂ ರಾಷ್ಟ್ರ ರಾಜಧಾನಿಯ ಹಲವೆಡೆಗಳಲ್ಲಿ ಮತದಾರರು ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೆಹಲಿಯ 70 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ....

ಆಪ್ ಗೆ ಮತ ಹಾಕದೇ ಇದ್ದರೆ ಬಾಂಬ್ ಹಾಕುವುದಾಗಿ ಕಾರ್ಯಕರ್ತರಿಂದ ಬೆದರಿಕೆ

'ದೆಹಲಿ' ವಿಧಾನಸಭೆಗೆ ಮತದಾನ ನಡೆಯುತ್ತಿರುವ ದಿನದಂದೂ ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪ ಕೇಳಿಬಂದಿದೆ. ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಸ್ಪರ್ಧಿಸಿರುವ ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಹಾಕದಂತೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತದಾರರಿಗೆ ಬೆದರಿಕೆ...

ದೆಹಲಿ ಚುನಾವಣೆ: ಘಟಾನುಘಟಿಗಳಿಂದ ಮತದಾನ

ದೆಹಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಪ್ರಕ್ರಿಯೆ ಬಿರುಸುಪಡೆದುಕೊಂಡಿದೆ. ಕೊರೆಯುವ ಚೆಳಿಯನ್ನೂ ಲೆಕ್ಕಿಸದೇ ಮತದಾರರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಬೆಳಿಗ್ಗೆ 11ಗಂಟೆಯವರೆಗೆ ಶೇ.19.7ರಷ್ಟು ಮತದಾನ ನಡೆದ ಬಗ್ಗೆ ವರದಿಯಾಗಿದೆ. ಈ ನಡುವೆ ರಾಜಕೀಯ ಧುರೀಣರು, ಘಟಾನುಘಟಿ ನಾಯಕರು...

ದೆಹಲಿ ಚುನಾವಣೆ: ಬಿರುಸು ಪಡೆದುಕೊಂಡ ಬಹಿರಂಗ ಪ್ರಚಾರ

ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ದಿನ ಮಾತ್ರ ಬಾಕಿಯಿದೆ. ಈ ನಿಟ್ಟಿನಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನವಾಗಿದ್ದು, ಬಿಜೆಪಿ, ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಚುನಾವಣಾ ಪ್ರಚಾದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಭಾವುಕರಾದ ಕಿರಣ್ ಬೇಡಿ

ಮಾಜಿ ಐಪಿಎಸ್ ಅಧಿಕಾರಿ, ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಚುನಾವಣಾ ರ್ಯಾಲಿ ವೇಳೆ ಜನರೆದುರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಜನರ ಪ್ರೀತಿ ಕಂಡು ಭಾವುಕರಾದ ಬೇಡಿ ಕಣ್ಣೀರಿಟ್ಟರು. ಜನರ ಪ್ರೀತಿ...

ದೆಹಲಿ ಚುನಾವಣೆ: ಬಿಜೆಪಿ ವಿಷನ್ ಡಾಕ್ಯೂಮೆಂಟ್ ಬಿಡುಗಡೆ

ಫೆ.7ರಂದು ನಡೆಯಲಿರುವ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದ್ದು, ಚುನಾವಣಾ ಪ್ರಣಾಳಿಕೆ ಬದಲಾಗಿ ವಿಷನ್ ಡಾಕ್ಯೂಮೆಂಟ್ ಬಿಡುಗಡೆ ಮಾಡಿದೆ. ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಹಾಗೂ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಾಯ...

ಬಿಜೆಪಿಗೆ ನರೇಂದ್ರ ಟಂಡನ್ ರಾಜೀನಾಮೆ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಿರಣ್ ಬೇಡಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನರೇಂದ್ರ ಟಂಡನ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಫೆ.7ರಂದು ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಚುನಾವಣೆಗೆ ಕೆಲ ದಿನಗಳ ಮೊದಲು ನರೇಂದ್ರ ಟಂಡನ್ ಬಿಜೆಪಿಗೆ ರಾಜೀನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಟಂಡನ್, ಕಿರಣ್...

ರಾಜೀನಾಮೆ ವಾಪಸ್ ಪಡೆದ ನರೇಂದ್ರ ಟಂಡನ್

ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕ ನರೇಂದ್ರ ಟಂಡನ್ ಪಕ್ಷಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಮಾಧ್ಯಮಗಳಿಗೆ ತಾವು ರಾಜೀನಾಮೆ ವಾಪಸ್ ಪಡೆದಿರುವುದನ್ನು ಸ್ಪಷ್ಟಪಡಿಸಿರುವ ನರೇಂದ್ರ ಟಂಡನ್, ತಾವು ಆತುರದ ನಿರ್ಧಾರ ಕೈಗೊಂಡಿದ್ದಾಗಿ...

ಕಿರಣ್ ಬೇಡಿಗಿಂತ ಸುಂದರವಾಗಿರುವ ಶಾಜಿಯಾ ಇಲ್ಮಿ ಸಿಎಂ ಅಭ್ಯರ್ಥಿಯಾಗಬೇಕಿತ್ತು :ಕಾಟ್ಜು

'ಪತ್ರಿಕಾ ಮಂಡಳಿ'ಯ ಮಾಜಿ ಅಧ್ಯಕ್ಷ ಮಾರ್ಕಾಂಡೇಯ ಕಾಟ್ಜು ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಸುಂದರವಾಗಿರುವ ಕತ್ರಿನಾ ಕೈಫ್ ಭಾರತದ ರಾಷ್ಟ್ರಪತಿಯಾಗಲಿ ಎಂದು ಹೇಳಿದ ನಂತರ ಈಗ ಕಿರಣ್ ಬೇಡಿ ಹಾಗೂ ಶಾಜಿಯಾ ಇಲ್ಮಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೆಹಲಿ...

ದೆಹಲಿಯಲ್ಲಿ ಪ್ರಧಾನಿ ಮೋದಿ ಮೊದಲ ಚುನಾವಣಾ ರ್ಯಾಲಿ

ಮತದಾರರು ಒಂದು ಬಾರಿ ತಪ್ಪು ಮಾಡಬಹುದು. ಆದರೆ ಪದೇ ಪದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಆಪ್ ನೇತಾರ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಫೆ.7ರಂದು ದೆಹಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ...

ಕಿರಣ್ ಬೇಡಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ಕಿರಣ್‌ ಬೇಡಿ ಪ್ರವೇಶಕ್ಕೆ ಮುನ್ನ ದೆಹಲಿ ಬಿಜೆಪಿಯು ಮುಳುಗುವ ಅಂಚಿನಲ್ಲಿತ್ತು. ಇದೀಗ ಬಿಜೆಪಿಯನ್ನು ಸಂಪೂರ್ಣವಾಗಿ ಮುಳುಗಿಸುವಿಕೆಯಲ್ಲಿ ಬೇಡಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಕಿರಣ್ ಬೇಡಿ...

ಆಮಂತ್ರಣ ಬೇಕಿದ್ದರೆ ಕೇಜ್ರಿವಾಲ್ ಬಿಜೆಪಿಗೆ ಸೇರಲಿ: ಕಿರಣ್‌ ಬೇಡಿ ತಿರುಗೇಟು

ಆಮಂತ್ರಣ ಬೇಕಿದ್ದರೆ ಕೇಜ್ರಿವಾಲ್ ಬಿಜೆಪಿಗೆ ಸೇರಲಿ: ಕಿರಣ್‌ ಬೇಡಿ ತಿರುಗೇಟು ಅರವಿಂದ್ ಕೇಜ್ರಿವಾಲ್‌ ಅವರಿಗೆ ಗಣರಾಜ್ಯೋತ್ಸವದ ಆಮಂತ್ರಣ ಬೇಕಿದ್ದರೆ ಬಿಜೆಪಿಗೆ ಸೇರ್ಪಡೆಯಾಗಲಿ ಎಂದು ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಹೇಳಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಪರೇಡ್‌ನಲ್ಲಿ ಭಾಗವಹಿಸಲು ನನಗೆ ಆಹ್ವಾನ ನೀಡಿಲ್ಲ...

ಬಿಜೆಪಿ ಎಂದರೆ ಭಾರತೀಯ ನೊಟೀಸ್ ಪಾರ್ಟಿ: ಆಪ್ ಲೇವಡಿ

'ಬಿಜೆಪಿ' ವಿರುದ್ಧ ವಾಗ್ದಾಳಿ ನಡೆಸಿರುವ ಆಮ್ ಆದ್ಮಿ ಪಕ್ಷ, ಬಿಜೆಪಿಯನ್ನು ಭಾರತೀಯ ನೊಟೀಸ್ ಪಕ್ಷ ಎಂದು ಟೀಕಿಸಿದೆ. ಓಟಿಗಾಗಿ ನೀಡುವ ಹಣವನ್ನು ತೆಗೆದುಕೊಂಡು ಎಎಪಿಗೇ ಮತ ಹಾಕಿ ಎಂದು ಅರವಿಂದ್ ಕೇಜ್ರಿವಾಲ್ ಮತ್ತೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿ ಬಿಜೆಪಿ ಮುಖ್ಯಮಂತ್ರಿ...

ದೆಹಲಿ ಚುನಾವಣೆ: ಆಸ್ತಿ ವಿವರ ಘೋಷಿಸಿದ ಕಿರಣ್ ಬೇಡಿ, ಕೇಜ್ರಿವಾಲ್

ದೆಹಲಿಯ ಕೃಷ್ಣಾನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಹುರಿಯಾಳಾಗಿ ನಾಮಪತ್ರ ಸಲ್ಲಿಸಿದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‌ ಬೇಡಿ, 11.65 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ ಇವರ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ತಮ್ಮ ಒಟ್ಟು ಆಸ್ತಿ ಮೌಲ್ಯದ ಪೈಕಿ 11,04,02,677...

ಕಿರಣ್‌ ಬೇಡಿಯನ್ನು ಹೊಗಳಿದ ಆಪ್‌ನ ಶಾಂತಿ ಭೂಷಣ್‌

ಕಿರಣ್ ಬೇಡಿ ಖಂಡಿತವಾಗಿಯೂ ಉತ್ತಮ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಶಾಂತಿ ಭೂಷಣ್ ಹೊಗಳಿಕೆ ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಾಂತಿ ಭೂಷಣ್‌, ಬಿಜೆಪಿ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಯನ್ನಾಗಿ ಆಯ್ಕೆ ಮಾಡಿರುವುದು ಒಂದು...

ಆರ್.ಎಸ್.ಎಸ್ ರಾಷ್ಟ್ರೀಯವಾದಿ ಸಂಘಟನೆ: ಕಿರಣ್ ಬೇಡಿ

'ಆರ್.ಎಸ್.ಎಸ್' ರಾಷ್ಟ್ರೀಯವಾದಿ ಸಂಘಟನೆಯಾಗಿದ್ದು, ದೇಶವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ದೆಹಲಿ ಬಿಜೆಪಿ ಸಿ.ಎಂ ಅಭ್ಯರ್ಥಿ ಕಿರಣ್ ಬೇಡಿ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಿರಣ್ ಬೇಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶವನ್ನು ಒಗ್ಗೂಡಿಸಿದ್ದು ದೇಶದ ಅಭಿವೃದ್ಧಿಯಲ್ಲಿ ಆರ್.ಎಸ್.ಎಸ್...

ಸ್ವಾತಂತ್ರ್ಯ ಹೋರಾಟಗಾರರನ್ನು ಕೇಸರಿಕರಣಗೊಳಿಸಬೇಡಿ: ಕಿರಣ್ ಬೇಡಿಗೆ ಆಪ್ ಸಲಹೆ

ಫೆ.7ರಂದು ನಡೆಯಲಿರುವ ದೆಹಲಿ ಚುನಾವಣೆಗೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಲಾಲಾ ಲಜ್ಪತ್ ರಾಯ್ ಅವರ ಪುತ್ಥಳಿಗೆ ಕೇಸರಿ ಶಾಲುವನ್ನು ಹೊದಿಸಿದ್ದು ಆಮ್ ಆದ್ಮಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ. ಲಾಲಾ ಲಜ್ಪತ್ ರಾಯ್ ಅವರ ಪುತ್ಥಳಿಗೆ...

ಕಿರಣ್ ಬೇಡಿ ದೆಹಲಿಯ ಬಿಜೆಪಿ ಸಿಎಂ ಅಭ್ಯರ್ಥಿ

ನಿರೀಕ್ಷೆಯಂತೆಯೇ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ, ಮಾಜಿ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ಅವರ ಹೆಸರನ್ನು ರಾತ್ರಿ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಪಕ್ಷದ ಸಂಸದೀಯ ಮತ್ತು ಚುನಾವಣಾ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ....

ಬಹಿರಂಗ ಚರ್ಚೆಗೆ ಬರಲು ಸಿದ್ಧ: ಕಿರಣ್ ಬೇಡಿ

ಫೆ.7ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಹಿರಂಗ ಚರ್ಚೆಗೆ ಬರುವಂತೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನೀಡಿದ್ದ ಸವಾಲು ಸ್ವೀಕರಿಸಿರುವ ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ, ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು...

ಬಿಜೆಪಿ ಚುನಾವಣಾ ಸಮಿತಿ ಸಭೆ: ಸಿಎಂ ಅಭ್ಯರ್ಥಿ ಆಯ್ಕೆ ಸಾಧ್ಯತೆ

ಫೆ.7ರಂದು ದೆಹಲಿ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ದೆಹಲಿಯ ಪಕ್ಷದ ಕೇಂದ್ರ ಕಛೇರಿಯಲ್ಲಿ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ದೆಹಲಿಯ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಹೆಸರನ್ನು...

ಕಿರಣ್‌ ಬೇಡಿ ಸಿಎಂ ಅಭ್ಯರ್ಥಿ ಎಂದು ನಿರ್ಧರಿಸಿಲ್ಲ : ರಾಜನಾಥ್ ಸಿಂಗ್

ಬಿಜೆಪಿಗೆ ಸೇರ್ಪಡೆಯಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್‌ ಬೇಡಿಯವರನ್ನು ದೆಹಲಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಬಗ್ಗೆ ತೀರ್ಮಾನವಾಗಿಲ್ಲ ಎಂದು ಗೃಹ ಸಚಿವ ರಾಜನಾಥ್‌ಸಿಂಗ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಅವರು ಪ್ರಧಾನಿ ನರೇಂದ್ರಮೋದಿ ನಾಯಕತ್ವ ಮೆಚ್ಚಿ...

ಕಿರಣ್ ಬೇಡಿ ಬಿಜೆಪಿ ಸೇರಿದ ದಿನ ಆಮ್ ಆದ್ಮಿ ಗೆ ಹರಿದುಬಂತು 64 ಲಕ್ಷ ರೂ ದೇಣಿಗೆ!

ಕಿರಣ್ ಬೇಡಿ ಬಿಜೆಪಿ ಸೇರ್ಪಡೆಯಾದಾಗಿನಿಂದ ದೆಹಲಿ ಚುನಾವಣಾ ಕಣದ ಚಿತ್ರಣವೇ ಬದಲಾಗಿಹೋಗಿದೆ ಎಂಬ ಮಾತು ಕೇಳಿಬರುತ್ತಿವೆ. ಆದರೆ ಕಿರಣ್ ಬೇಡಿ ಬಿಜೆಪಿ ಸೇರಿರುವುದು ದೇಣಿಗೆ ಸಂಗ್ರಹದ ವಿಷಯದಲ್ಲಿ ಆಮ್ ಆದ್ಮಿಗೆ ಯಾವುದೇ ನಷ್ಟ ಉಂಟುಮಾಡಿಲ್ಲ. ಕಿರಣ್ ಬೇಡಿ ಬಿಜೆಪಿ ಸೇರಿದ ದಿನದಂದೇ...

ದೆಹಲಿ ಚುನಾವಣೆ: ಎಲ್ಲಾ ಕ್ಷೇತ್ರಗಳಲ್ಲೂ ಕಿರಣ್ ಬೇಡಿ ಪ್ರಚಾರ

ಎರಡು ದಿನಗಳ ಹಿಂದಷ್ಟೆ ಬಿಜೆಪಿ ಸೇರಿದ್ದ ಕಿರಣ್ ಬೇಡಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಶತಾಯಗತಾಯ ಗೆಲುವು ಸಾಧಿಸಲು ಬಿಜೆಪಿ ತಂತ್ರ ರೂಪಿಸಿದ್ದು, ಪ್ರಮುಖವಾಗಿ ಐದು ಕಡೆಗಳಲ್ಲಿ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರ ರಾಲಿ ಆಯೋಜಿಸಿದೆ. ಅಲ್ಲದೇ...

ಮುಳುಗುತ್ತಿರುವ ಬಿಜೆಪಿ ದೋಣಿಯನ್ನು ಕಿರಣ್ ಬೇಡಿ ಕಾಪಾಡಲು ಸಾಧ್ಯವೇ: ಕೇಜ್ರಿವಾಲ್

ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿ ಸೇರಿರುವುದಕ್ಕೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಮುಳುಗುತ್ತಿರುವ ಬಿಜೆಪಿ ದೋಣಿಯನ್ನು ಕಾಪಾಡಲು ಕಿರಣ್ ಬೇಡಿ ಅವರಿಂದ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಅಣ್ಣಾ ಹಜಾರೆ ಅವರೊಂದಿಗೆ ಹೋರಾಟ ನಡೆಸುತ್ತಿದ್ದ...

ಬಿಜೆಪಿ ಸೇರಿದ ಮಾಜಿ ಆಮ್ ಆದ್ಮಿ ಪಕ್ಷದ ನಾಯಕಿ ಶಾಜಿಯಾ ಇಲ್ಮಿ

'ದೆಹಲಿ' ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಎಲ್ಲರೂ ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ. ಈ ಪಟ್ಟಿಗೆ ಈಗ ಮಾಜಿ ಆಮ್ ಆದ್ಮಿ ಪಕ್ಷದ ನಾಯಕಿ ಶಾಜಿಯಾ ಇಲ್ಮಿ ಸಹ ಸೇರ್ಪಡೆಗೊಂಡಿದ್ದಾರೆ. ಜ.16ರಂದು ನವದೆಹಲಿಯಲ್ಲಿ ಬಿಜೆಪಿ ದೆಹಲಿ ಅಧ್ಯಕ್ಷ ಸತೀಶ್ ಉಪಾಧ್ಯಾಯ...

ದೆಹಲಿ ಚುನಾವಣೆ: ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿ ಸೇರ್ಪಡೆ

ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ದೆಹಲಿ ಚುನಾವಣೆ ಎದುರಿಸುವುದು ಖಚಿತವಾಗಿದೆ. ಜ.15ರಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಕಿರಣ್ ಬೇಡಿ ಬಿಜೆಪಿ ಸೇರ್ಪಡೆಗೊಂಡರು. ಕಿರಣ್ ಬೇಡಿ ಬಿಜೆಪಿಗೆ ಸೇರ್ಪಡೆಗೊಂಡಿರುವುದರಿಂದ ಅವರು ಆಮ್ ಆದ್ಮಿ ಪಕ್ಷದ...

ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿಯಿಂದ ಮತ್ತಷ್ಟು ಜನರ ನಾಮನಿರ್ದೇಶನ

ಡಿ.25ರಂದು ವಾರಾಣಸಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸ್ವಚ್ಛ ಭಾರತ ಅಭಿಯಾನಕ್ಕೆ ಮತ್ತಷ್ಟು ಗಣ್ಯರನ್ನು ನಾಮನಿರ್ದೇಶನ ಮಾಡಿದ್ದಾರೆ. ಡಿ.25ರಂದು ಭಾರತ ರತ್ನ ಪುರಸ್ಕೃತ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ವಾರಾಣಸಿಗೆ ಭೇಟಿ ನೀಡಿ ಮಾತನಾಡಿದ ಪ್ರಧಾನಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited